ಕರ್ನಾಟಕ | ಜಿಲ್ಲಾ ಸುದ್ದಿ | ರಾಜಕೀಯ | ಸಮಾಜ | ಸ್ಥಳೀಯ ಸುದ್ದಿ
ಸಂಪೇಕಟ್ಟೆಯಲ್ಲಿ ಮಾನವೀಯತೆಗೆ ಮತ್ತೊಂದು ಹೆಜ್ಜೆ: ₹8 ಲಕ್ಷ ಮೌಲ್ಯದ ಆಂಬುಲೆನ್ಸ್ ಸಾರ್ವಜನಿಕ ಸೇವೆಗೆ ಸಮರ್ಪಣೆ
ಸಂಪೇಕಟ್ಟೆ: ಉತ್ಸವ ಹಾಗೂ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ, ಸಂಕಷ್ಟದಲ್ಲಿರುವ ಜನರ ನೆರವಿಗೆ ನಿಲ್ಲುವ ಉದ್ದೇಶದಿಂದ ಸಂಪೇಕಟ್ಟೆಯ ಶ್ರೀ ಪ್ರಸನ್ನ ಗಣಪತಿ ಜೀಪ್ ಮಾಲೀಕರ ಸಂಘ ಸಮಾಜಮುಖಿ ಹೆಜ್ಜೆಯೊಂದನ್ನು ಇಟ್ಟಿದೆ. ಸಂಘದ ದಶಮಾನೋತ್ಸವದ ಅಂಗವಾಗಿ ಸ್ಥಳೀಯರಿಂದ ವಂತಿಗೆ ಸಂಗ್ರಹಿಸಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಆಂಬುಲೆನ್ಸ್ ವಾಹನವನ್ನು ಖರೀದಿಸಿ ಸಾರ್ವಜನಿಕರ ಉಚಿತ ಬಳಕೆಗೆ ನೀಡಲಾಗಿದೆ. ಸಂಪೇಕಟ್ಟೆ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಚಾದ್ರಿ ಸಂಜೀವಿನಿ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ…
