ಮಾವಿನಕೊಪ್ಪದಲ್ಲಿ 42ನೇ ಶ್ರೀ ಬಾಲಗಣಪತಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅದ್ದೂರಿ ಚಾಲನೆ
ಹೊಸನಗರ: ತಾಲೂಕಿನ ಮಾವಿನಕೊಪ್ಪದಲ್ಲಿ 42ನೇ ಶ್ರೀ ಬಾಲಗಣಪತಿ ಸಾರ್ವಜನಿಕ ಗಣೇಶೋತ್ಸವವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಗಣೇಶೋತ್ಸವವು ಮಾವಿನಕೊಪ್ಪದ ಜನರ ಭಕ್ತಿ, ಒಗ್ಗಟ್ಟು ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಮೋಹನದಾಸ ಶೆಣೈ ತಿಳಿಸಿದ್ದಾರೆ. ಬುಧವಾರ ಬಾಲಗಣಪತಿ ಕೈಲಾಸ ಪರ್ವತದಲ್ಲಿ ಶಿವನು ಕುಳಿತಿರುವ ಭಂಗಿಯಲ್ಲಿ ಗಣಪತಿ ಮೂರ್ತಿಯನ್ನು ರೂಪಿಸಲಾಗಿದ್ದು, ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಗಣೇಶೋತ್ಸವದ ಅಂಗವಾಗಿ…
