ಹೊಂಬುಜದಲ್ಲಿ ಪರ್ಯುಷಣ ಪರ್ವ ಆಚರಣೆ: ಮನಃಶುದ್ಧಿಗೆ ಜೈನ ಧರ್ಮದ ಮೂಲಸಿದ್ಧಾಂತಗಳ ಸಂದೇಶ
ಹೊಂಬುಜದಲ್ಲಿ ಪರ್ಯುಷಣ ಪರ್ವ ಆಚರಣೆ ಹೊಂಬುಜ: ಜೈನ ಧರ್ಮದ ಮೂಲಸಿದ್ಧಾಂತಗಳು ಜೀವನದ ಮಾಲಿನ್ಯವನ್ನು ನಿವಾರಿಸಿ, ಮತ್ತಷ್ಟು ಮಾಲಿನ್ಯ ಉಂಟಾಗದಂತೆ ತಡೆದು ಮನಃಶುದ್ಧಿಗೆ ದಾರಿ ಮಾಡಿಕೊಡುತ್ತವೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ತಿಳಿಸಿದ್ದಾರೆ. ಭಾದ್ರಪದ ಶುಕ್ಲ ಪಂಚಮಿಯಂದು ಆಗಮೋಕ್ತ ಶಾಸ್ತ್ರದನ್ವಯ ದಶಲಕ್ಷಣ ಪರ್ವ ಅಥವಾ ಪರ್ಯುಷಣ ಪರ್ವ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ ಹೊಂಬುಜದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಪರ್ಯುಷಣ ಪರ್ವದ ಆಚರಣೆಯ ಅಂಗವಾಗಿ ಭಟ್ಟಾರಕ…
